International ಬ್ರೇಕಿಂಗ್ ನ್ಯೂಸ್
ಚೀನಾ ಪ್ರವಾಸದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ
ಕ್ಸಿಯಾಮೆನ್ HiTHIUMಸಂಸ್ಥೆಗೆ ಭೇಟಿ

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರು
ಗುರುವಾರ, ಸೆಪ್ಟೆಂಬರ್ 24, 20262 ನಿಮಿಷ ಓದು33 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಚೀನಾ,ಸೆ.೨೪-ಕ್ಸಿಯಾಮೆನ್ ನಲ್ಲಿರುವ HiTHIUM ಸಂಸ್ಥೆಯ ಘಟಕಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿದರು.
ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ (BESS), ಅತ್ಯಾಧುನಿಕ ಉತ್ಪಾದನಾ ವ್ಯವಸ್ಥೆಗಳು ಹಾಗೂ ಇಂಧನ ತಂತ್ರಜ್ಞಾನಗಳಲ್ಲಿ HiTHIUM ಹೊಂದಿರುವ ತಾಂತ್ರಿಕ ಸಾಮರ್ಥ್ಯಗಳನ್ನು ಸಚಿವರು ಅವಲೋಕನ ನಡೆಸಿದರು.
ಭಾರತದಲ್ಲಿ Battery Energy Storage System (BESS), ಎಲೆಕ್ಟ್ರಿಕ್ ಮೊಬಿಲಿಟಿ, ನವೀಕರಿಸ ಬಹುದಾದ ಇಂಧನ ಹಾಗೂ ಸುಧಾರಿತ ಉತ್ಪಾದನಾ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ GTTC ಮತ್ತು HiTHIUM ನಡುವೆ ಸಹಯೋಗ ಕುರಿತು ಈ ವೇಳೆ ಚರ್ಚಿಸಲಾಯಿತು. ಬ್ಯಾಟರಿ ತಂತ್ರಜ್ಞಾನ, BESS ಹಾಗೂ ಸಂಬಂಧಿತ ಉದ ಯೋನ್ಮುಖ ತಂತ್ರಜ್ಞಾನ ಗಳಿಗಾಗಿ GTTC – HiTHIUM ಸೆಂಟರ್ ಆಫ್ ಎಕ್ಸಲೆನ್ಸ್ಅನ್ನು ಸ್ಥಾಪಿಸುವ ಅಗತ್ಯತೆ, ಬ್ಯಾಟರಿ ತಯಾರಿಕೆ, ಅಳವಡಿಕೆ, ಪರೀಕ್ಷೆ, ನಿರ್ವಹಣೆ, ಸುರಕ್ಷತೆ ಹಾಗೂ ಕಮಿಷ ನಿಂಗ್ ಕ್ಷೇತ್ರಗಳಲ್ಲಿ ಕೈಗಾರಿಕಾ ಅವಶ್ಯಕತೆಗಳಿಗೆ ಅನುಗುಣವಾದ ತರಬೇತಿ ನೀಡುವ ಕುರಿತು ಜಂಟಿಯಾಗಿ ರೂಪಿಸುವುದರ ಬಗ್ಗೆ ಮಾಹಿತಿ ವಿನಿ ಮಯ ಮಾಡಿಕೊಳ್ಳಲಾಯಿತು. HiTHIUM ಸಂಸ್ಥೆಯ ಮುಖ್ಯಸ್ಥರು, ಘಟಕದ ನಿರ್ವಹಣೆಗಾರರು ಉಪಸ್ಥಿತರಿದ್ದರು.
ಶಾಂಘೈನಲ್ಲಿ ಸ್ಯಾಮ್ಸಂಗ್ ಪ್ರತಿನಿಧಿಗಳ ಜತೆ ಸಭೆ
---
ಶಾಂಘೈ, ಸೆ.೨೪- ಚೀನಾದ ಶಾಂಘೈದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯ ಪ್ರತಿನಿಧಿಗಳೊಂದಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾಳುಗಳಿಗೆ ಮುಂಬರುವ ದಿನಗಳಲ್ಲಿ Worldskills ಸ್ಪರ್ಧೆಗೆ ತರಬೇತಿ ಮತ್ತು ಸಿದ್ಧತೆ ಒದಗಿಸುವುದು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು.
ತಾಂತ್ರಿಕ ತಜ್ಞರು, ತರಬೇತುದಾರರು ಹಾಗೂ ಮೌಲ್ಯಮಾಪಕರ ವಿನಿಮಯ, ಸುಧಾರಿತ ವೃತ್ತಿಪರ ಹಾಗೂ ಕೈಗಾರಿಕಾ ಆಧಾರಿತ ಕೌಶಲ್ಯಾಭಿವೃದ್ಧಿ, ವೆಲ್ಡಿಂಗ್, ಎಲೆಕ್ಟ್ರಿಕಲ್ ಇನ್ಸ್ಟಾಲೇಶನ್ ಹಾಗೂ ಇಂಡಸ್ಟ್ರಿಯಲ್ ಕಂಟ್ರೋಲ್ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರ ನೀಡುವುದು. ಜಂಟಿಯಾಗಿ ತರಬೇತಿ ಕಾರ್ಯಕ್ರಮಗಳು ಹಾಗೂ ತಾಂತ್ರಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಕುರಿತು ಸುಧೀರ್ಘ ಮಾತುಕತೆ ನಡೆಯಿತು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads