📅 ಮಂಗಳವಾರ, ಅಕ್ಟೋಬರ್ 6, 2026
Myna News Logo
ಮೈನಾ

ಸೇಡಂ

ನ್ಯೂಸ್

ಕನ್ನಡ ದಿನ ಪತ್ರಿಕೆ
Editor

ಪ್ರಧಾನ ಸಂಪಾದಕರು:

ಮಹಿಪಾಲರೆಡ್ಡಿ

Ads
Column

ಸತೀಶನ ಸ್ವಾರ್ಥತನ

ಸಣ್ಣ ಕತೆ

- ಪ್ರೊ.ಶೋಭಾದೇವಿ ಚೆಕ್ಕಿ

- ಪ್ರೊ.ಶೋಭಾದೇವಿ ಚೆಕ್ಕಿ

ಪ್ರಧಾನ ಸಂಪಾದಕರು

ಶನಿವಾರ, ಸೆಪ್ಟೆಂಬರ್ 19, 20262 ನಿಮಿಷ ಓದು3 ವೀಕ್ಷಣೆಗಳು
ಸುದ್ದಿ ಹಂಚಿಕೊಳ್ಳಿ:
ಸತೀಶನ ಸ್ವಾರ್ಥತನ
ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ವೀರಣ್ಣ ಮತ್ತು ಸಾವಿತ್ರಿ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳ ನಂತರ ಒಬ್ಬ ಮಗ ಜನಿಸುತ್ತಾನೆ. ಆತನೇ ಸತೀಶ. ವಂಶೋದ್ಧಾರಕನೆAದು ಆತನನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದರು. ಅಕ್ಕಂದಿರಿಗೂ ಅವನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಎಲ್ಲರಿಂದ ಪ್ರೀತಿಸಲ್ಪಟ್ಟ ಸತೀಶ ಅದನ್ನೇ ಜೀವನದುದ್ದಕ್ಕೂ ನಿರೀಕ್ಷಿಸುತ್ತ ನಡೆದ. ತನ್ನ ಬಗ್ಗೆ ಮಾತ್ರ ಕಾಳಜಿವಹಿಸುತ್ತಾ ಸ್ವಾರ್ಥಿಯಾಗಿ ರೂಪುಗೊಂಡ. ವೀರಣ್ಣ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸದೆ ಸತೀಶನಿಗೆ ಮಾತ್ರ ಅವನಿಚ್ಛೆಯಂತೆ ಇಂಜಿನಿಯರಿAಗ್ ಓದಿಸಿದ. ಆತ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ನೇಮಕಗೊಂಡ. ಮಗನ ಸಾಧನೆಯನ್ನು ಕಂಡ ವೀರಣ್ಣನ ಸಂತೋಷಕ್ಕೆ ಪಾರವೇ ಇಲ್ಲ. ಬೇಡಿದ್ದನ್ನೆಲ್ಲ ಪೂರೈಸುವ ತಂದೆತಾಯಿಯ ಬಗ್ಗೆಯೂ ಸತೀಶ ಕಿಂಚಿತ್ತೂ ಕಾಳಜಿ ವಹಿಸದಾದ. ಉಪನ್ಯಾಸಕಿಯಾಗಿದ್ದ ಸಾರಿಕಾಳೊಂದಿಗೆ ಸತೀಶನ ಮದುವೆ ನಡೆದು ಹೋಯಿತು.ಯಾರ ಬಗ್ಗೆಯೂ ಕಾಳಜಿ ವಹಿಸದೆ ತನ್ನ ಬಗ್ಗೆ ಮಾತ್ರವೇ ಯೋಚಿಸುವ ಪತಿಯನ್ನು ಕಂಡು ಸಾರಿಕಾಳಿಗೆ ವಿಚಿತ್ರವೆನಿಸಿತು.ತನ್ನ ಊಟ,ಬಟ್ಟೆ, ಉದ್ಯೋಗದ ಕಡೆಗೆ ಮಾತ್ರ ಗಮನ ಹರಿಸುವ ಸತೀಶ ಹೆಂಡತಿ ತನ್ನೆರಡು ಮಕ್ಕಳ ಯೋಗಕ್ಷೇಮವನ್ನೂ ನೋಡಿಕೊಳ್ಳದಾದ. ಸಾರಿಕಾ ತನ್ನ ಉದ್ಯೋಗದ ಜೊತೆಗೆ ಕುಟುಂಬ ನಿರ್ವಹಣೆಯನ್ನೂ ಮಾಡತೊಡಗಿದಳು. ವೀರಣ್ಣ ಹೃದಯಾಘಾತದಿಂದಾಗಿ ತೀರಿಕೊಂಡ. ಸಾವಿತ್ರಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದಳು. ಸ್ವಾರ್ಥಿಯಾಗಿರುವ ಸತೀಶ ಇದ್ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ನಿರುಮ್ಮಳನಾಗಿದ್ದಾನೆ. ಸತೀಶನ ಮಗಳು ಸೀಮಾ ವೈದ್ಯಳಾದರೆ, ಮಗ ರಾಜು ಇಂಜಿನಿಯರ್ ಆದ. ವಯಸ್ಸಿಗೆ ಬಂದ ಮಕ್ಕಳ ಮದುವೆಯ ಬಗ್ಗೆ ಕಿಂಚಿತ್ತೂ ವಿಚಾರ ಮಾಡುವುದಿಲ್ಲ. ಸಾರಿಕಾ ಒಳ್ಳೆಯ ಸಂಬAಧ ನೋಡಿ ಸೀಮಾಳ ಮದುವೆ ಮಾಡಿದಳು. ರಾಜು ಕೂಡಾ ಇಂಜಿನಿಯರ್ ಆಗಿದ್ದ ರಜನಿಯನ್ನು ವರಿಸಿದ. ಸಾರಿಕಾ, ರಜನಿ, ರಾಜು ಎಲ್ಲರೂ ಉದ್ಯೋಗದ ನಿಮಿತ್ತ ಬೆಳಿಗ್ಗೆಯೇ ಮನೆಯಿಂದ ಹೊರಡುವರು. ಹಿಂದಿರುಗಿ ಬರುವುದು ಸಾಯಂಕಾಲವೇ. ಅಡುಗೆ, ಮನೆಗೆಲಸ ಎಲ್ಲವನ್ನು ಗಡಿಬಿಡಿಯಿಂದ ಮುಗಿಸಿ ಹೊರಟು ನಿಂತ ಹೆಂಡತಿ ಮಗ ಸೊಸೆಗೆ ಸತೀಶ ಒಂಚೂರು ಸಹಾಯ ಮಾಡಲಾರ. ಬದಲಿಗೆ ಎಲ್ಲರೂ ತನಗೇ ಕೇರ್ ಮಾಡಬೇಕೆಂದು ಅಪೇಕ್ಷಿಸುವನು. ಮಾಡಿಟ್ಟ ಅಡಿಗೆಯನ್ನು ಬಡಿಸಿಕೊಂಡು ಉಣ್ಣಲಾರ. ಕೈಯಲ್ಲೇ ಊಟದ ತಟ್ಟೆ ಕೊಡಬೇಕು. ನೀರು ಕೂಡಾ ತೆಗೆದುಕೊಂಡು ಕುಡಿಯಲಾರ. ಬೆಳಿಗ್ಗೆ ನ್ಯೂಸ್ ಪೇಪರ್ ಯಾರೂ ಮುಟ್ಟುವಂತಿಲ್ಲ. ಮಗ ಸೊಸೆ ಯಾರಾದರೂ ತೆಗೆದುಕೊಂಡು ಓದಿದರೆ ಎಲ್ಲಿಲ್ಲದ ಕೋಪ. ಪೇಪರ್ ಮೇಲೆ ತಮ್ಮದೆ ಮೊದಲ ಅಧಿಕಾರ. ಟಿ.ವಿ.ರಿಮೋಟ ಕೂಡ ತನ್ನ ಕೈಯ್ಯಲ್ಲೇ ಇರಬೇಕು. ತನ್ನ ಮಂಚದ ಮೇಲೆ ಯಾರೂ ಕುಳಿತು ಕೊಳ್ಳಬಾರದು. ಪುಟ್ಟ ಮೊಮ್ಮಗ ಗೆಳೆಯರೊಂದಿಗೆ ಆಟವಾಡುತ್ತಿದ್ದರೆ ಗದರಿಸಿ ಬಿಡುವರು. ತನಗೆ ಯಾವುದೆ ತರಹದ ಡಿಸ್ಟರ್ಬ್ ಆಗುವಂತಿಲ್ಲ. ತನ್ನ ಸುಖ ಶಾಂತಿಯೆ ಮುಖ್ಯ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಳೆ ಬಂದು ಒಣಹಾಕಿದ ಬಟ್ಟೆ ತೋಯುತ್ತಿದ್ದರೆ ತನ್ನ ಬಟ್ಟೆ ಮಾತ್ರ ಎಳೆದುತಂದು ಮಡಿಚಿ ಇಟ್ಟುಕೊಳ್ಳುವರು. ಮಡದಿ ಮಕ್ಕಳ ಬಗ್ಗೆ ಯೋಚಿಸಿದೆ ಮನೆಯಲ್ಲಿರುವ ಹಣ್ಣು ಬ್ರೆಡ್ಡು ಬಿಸ್ಕೀಟು ತಿಂದು ಮುಗಿಸಿಬಿಡುವರು. ಸಿಟ್ಟಿನಿಂದ ಸಾರಿಕಾ, ಮಾರ್ಕೆಟಿಗೆ ಹೋಗಿ ತಿಂಡಿತಿನಿಸು ತರಲು ಹೇಳಿದರೆ ನಾನೊಬ್ಬ ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದೆ. ನಾನ್ಯಾವತ್ತೂ ಇಂತಹ ಚಿಕ್ಕಪುಟ್ಟ ಕೆಲಸ ಮಾಡಿಲ್ಲ. ಈಗಲೂ ಮಾಡಲಾರೆ ಎಂದು ದರ್ಪತೋರುವರು. ಗೆಳೆಯನೊಬ್ಬ ತೀರಿಹೋದ ಸುದ್ದಿಯನ್ನು ತಿಳಿಸಿದಾಗ ಹೌದಾ, ನಾನು ಅವನು ಕ್ಲಾಸ್ ಮೇಟ್ಸ ಆಗಿದ್ದೇವು. ನಾನು ನೋಡಿ .ಎಷ್ಟು ಗಟ್ಟಿಯಾಗಿದ್ದೇನೆ. ನಾನೊಬ್ಬ ಸೀದಾಸಾದಾ ಮನುಷ್ಯ. ಯಾವ ದುಷ್ಚಟವೂ ಇಲ್ಲ. ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನನಗೆ ಯಾವ ಕಾಯಿಲೆಯೂ ಇಲ್ಲ ಎಂದು ಜಂಭಕೊಚ್ಚಿಕೊಳ್ಳುವರೇ ಹೊರತು ಗೆಳೆಯ ತೀರಿ ಹೋದ ಬಗ್ಗೆ ಕಿಂಚಿತ್ತೂ ಸಂತಾನವೇ ಇಲ್ಲ. ಸತೀಶ ತನ್ನ ಇಳಿವಯಸ್ಸಿನಲ್ಲಿ ಗಡದ್ದಾಗಿ ಮೂರುಹೊತ್ತು ಊಟ ಮಾಡುವುದು, ನಿದ್ರೆ ಮಾಡುವುದು, ಪೇಪರ್ ಓದುವುದು, ಟಿ.ವಿ.ನೋಡುವುದು ಹೀಗೆ ತಾನೇ ಕಟ್ಟಿಕೊಂಡ ಸಂತೋಷದ ವಲಯವನ್ನು ಬಿಟ್ಟು ಹೊರಬರಲಾರ. ಯಾರ ಬಗ್ಗೆಯು ಶುಭ ಚಿಂತನೆ ಮಾಡಲಾರ. ಒಮ್ಮೆಯಾದರೂ ತನ್ನ ಅಕ್ಕಂದಿರನ್ನು,ಸ್ವAತ ಮಗಳನ್ನು ನೆನಸುವುದಿಲ್ಲ. ಸಾರಿಕಾ ಮಗಳ ಮನೆಗೆ ಹೋಗಿ ತಿಂಗಳೊಪ್ಪತ್ತಾದರೂ ಒಂದಿನಿತು ನೆನಸಲಾರ. ಸೇವೆ ಮಾಡುವ ಸೊಸೆ ಪ್ರೀತಿತೋರುವ ಮೊಮ್ಮಗನ ಬಗ್ಗೆಯೂ ಕಾಳಜಿ ಇಲ್ಲ.ಮಾನವ ಮೂಲತ: ಸ್ವಾರ್ಥಿ ಎನ್ನುವ ಮಾತಿಗೆ ಸತೀಶ ನಿದರ್ಶನವಾಗಿದ್ದಾನೆ.
ಟ್ಯಾಗ್ಸ್:#Sedam#Karnataka
ಮಹಿಪಾಲರೆಡ್ಡಿ

ಮಹಿಪಾಲರೆಡ್ಡಿ

ಪ್ರಧಾನ ಸಂಪಾದಕರು

ಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.

Ads