Sedam ಬ್ರೇಕಿಂಗ್ ನ್ಯೂಸ್
ಸೇಡಂನ ಹೇಮಾ ಕುಲಕರ್ಣಿ `ಹೈಕೋರ್ಟ್ ಜಡ್ಜ್'

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರು
ಸೋಮವಾರ, ಆಗಸ್ಟ್ 10, 20262 ನಿಮಿಷ ಓದು36 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
ಬೆಂಗಳೂರು: ಸೇಡಂನಲ್ಲಿ ತಂದೆ ವೆಂಕಟ ಸುರೇಂದ್ರ ಕುಲಕರ್ಣಿ ಅವರು ಹಿರಿಯ ಖ್ಯಾತ ವಕೀಲರು, ಚಿಕ್ಕಪ್ಪ ಶ್ರೀನಿವಾಸ ಕುಲಕರ್ಣಿ ಬೆಂಗಳೂರಿನಲ್ಲಿ ನ್ಯಾಯಾಧೀಶರಾಗಿದ್ದರು. ಪತಿ ಲಕ್ಷಿö್ಮಕಾಂತ ಕುಲಕರ್ಣಿ ಅವರು ವಕೀಲರಾದರೆ, ಅವರ ಪತ್ನಿ ಶ್ರೀಮತಿ ಹೇಮಾ ಕುಲಕರ್ಣಿ ಅವರು ಈಗ ಹೈಕೋರ್ಟ್ನ ನ್ಯಾಯಮೂರ್ತಿ.
ಪ್ರಸ್ತುತ ಕಲಬುರ್ಗಿಯಲ್ಲಿ ನೆಲೆಸಿರುವ ಅವರು, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಪ್ರಾಥಮಿಕ ಬಾಲಭಾರತಿ, ಪ್ರೌಢ ಮತ್ತು ಪಿಯು ಶಿಕ್ಷಣ ಮಾತೃಛಾಯಾ ಕಾಲೇಜಿನಲ್ಲಿ ಓದಿದ್ದಾರೆ.
ನಂತರ ಪದವಿ ಶಿಕ್ಷಣವನ್ನು ಕಲಬುರಗಿಯ ವಿ.ಜಿ .ಮಹಿಳಾ ಕಾಲೇಜು, ಎಸ್‌ಎಸ್‌ಎಲ್ ಕಾಲೇಜಿನಲ್ಲಿ ಕಾನೂನು ಪದವಿ, ಆಂಧ್ರಪ್ರದೇಶದ ನಾಗಾರ್ಜುನ ಕಾನೂನು ವಿಶ್ವವಿದ್ಯಾಲಯದಲ್ಲಿ ಎಲ್ ಎಲ್‌ಎಂ ಅಧ್ಯಯನ ಮಾಡಿದ್ದಾರೆ.
ಹೇಮಾ ಕುಲಕರ್ಣಿ ಅವರು ಭಾರತ ಸರ್ಕಾರದ ಹಿರಿಯ ಕಾನೂನು ಸಲಹೆ ಗಾರರು, ಕೇಂದ್ರೀಯ ವಿಶ್ವ ವಿದ್ಯಾಲಯ ಕಡಗಂಚಿ, ಜಾರಿ ನಿರ್ದೇಶ ನಾಲಯ (ಇಡಿ), ಕೇಂದ್ರೀಯ ಮಾಧ್ಯಮಿಕ ಶಿಕ್ಷಣ, ನೌಕರರ ರಾಜ್ಯ ವಿಮಾ ನಿಗಮ, ಯುಜಿಸಿಗೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೧ ರಲ್ಲಿ ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿಯ ಲಕ್ಷ್ಮಿಕಾಂತ ಕುಲಕರ್ಣಿ ಅವರ ಜತೆಗೆ ವಿವಾಹವಾಗಿದೆ. ಲಕ್ಷ್ಮಿಕಾಂತ ಕುಲಕರ್ಣಿ ಅವರು ಹೈಕೋರ್ಟ್ ವಕೀಲರಾಗಿದ್ದಾರೆ. ಸೇಡಂ ಮೂಲದ ಹೇಮಾ ಕುಲಕರ್ಣಿ ಅವರು ಹೈಕೋರ್ಟ್ ನ್ಯಾಯಮೂರ್ತಿ ಆಗುವ ಸುದ್ದಿ ತಿಳಿದ ತಕ್ಷಣವೇ ಸೇಡಂನ ವಕೀಲರಲ್ಲಿ ಸಂತಸ ಉಂಟು ಮಾಡಿದೆ. ೧೯೯೯ರಲ್ಲಿ ಕೆ.ಅಪ್ಪಾರಾವ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲ ವೃತ್ತಿ ಆರಂಭಿಸಿದ್ದು, ನಂತರ ೨೦೦೮ ರಿಂದ ಕಲಬುರಗಿಯಲ್ಲಿ ಪ್ರಭಾಕರ ಯಳಸಂಗಿ ಮಾರ್ಗದರ್ಶನದಲ್ಲಿ ಹೈಕೋರ್ಟ್ ವಕೀಲರಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ಬೆAಗಳೂರು, ಆಗಸ್ಟ್ ೦೯ : ಕರ್ನಾಟಕ ಉಚ್ಛ ನ್ಯಾಯಾಲಯದ ನೂತನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ರಾಘವೇಂದ್ರ ಸೀತಾರಾಂ ಶ್ರೀವತ್ಸ, ಶ್ರೀಮತಿ ಹೇಮಾ ಕುಲಕರ್ಣಿ, ಸುಬ್ರಹ್ಮಣ್ಯ ರಂಗರಾವ್, ತಡಗವಾಡಿ ಪ್ರಕಾಶ್ ವಿವೇಕಾನಂದ, ಬಕ್ಕೇಶ್ವರ ಪ್ರಮೋದ್ ಮತ್ತು ಹೊಂಬೇಗೌಡ ಶಾಂತಿ ಭೂಷಣ್ ಅವರು ಗೌರವಾನ್ವಿತ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಬು ಭಖ್ರು ಸೇರಿದಂತೆ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ವಕೀಲರು, ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads