Literature
ಕಗ್ಗ ದರ್ಶನ

ಡಾ.ಜಗನ್ನಾಥ ತರನಳ್ಳಿ
ಕನ್ನಡ ವಿದ್ವಾಂಸರು, ವಕೀಲರು
ಸೋಮವಾರ, ಆಗಸ್ಟ್ 10, 20262 ನಿಮಿಷ ಓದು4 ವೀಕ್ಷಣೆಗಳು

ಪೂರ್ಣಚಿತ್ರ ವೀಕ್ಷಿಸಲು ಕ್ಲಿಕ್ ಮಾಡಿ
Ads
೧೨೪. ಮೌನದೊಳೊ ಮಾತಿನೊಳೊ ಹಾಸ್ಯದೊಳೊ
ಹಾಡಿನೊಳು ಮಾನವಂ ಪ್ರಣಯದೊಳೊ
ವೀರ ವಿಜಯದಳೋ ಏನೊ ಎಂತೋ ಸಮಾಧಾನಗಳ
ನರಸುತಿಹ ನಾನಂದ ವಾತ್ಮಗುಣ ಮಂಕುತಿಮ್ಮ.
ಈ ಪದ್ಯದಲ್ಲಿ ಮನುಷ್ಯನ ಮನಸ್ಸು ಯಾವ ರೀತಿಯಲ್ಲಿ ಸಮಾಧಾನ ಮತ್ತು ಸಂತೋಷವನ್ನು ಹುಡುಕುತ್ತದೆ ಎಂಬುದನ್ನು ಸುಂದರವಾಗಿ ವಿವರಿಸಲಾಗಿದೆ.ಮನುಷ್ಯನ ಬದುಕಿನ ಅಂತಿಮ ಹುಡುಕಾಟ ನೆಮ್ಮದಿ ಮತ್ತು ಆನಂದಕ್ಕಾಗಿ ಎಂಬುದಾಗಿದೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಸಂತೋಷವನ್ನು ಹುಡುಕುತ್ತಾರೆ. ಕೆಲವರು ಮೌನದಲ್ಲಿ, ಕೆಲವರು ಮಾತಿನಲ್ಲಿ, ಹಾಸ್ಯದಲ್ಲಿ, ಕೆಲವರು ಪ್ರೀತಿಯಲ್ಲಿ, ಮತ್ತೆ ಕೆಲವರು ಸಾಧನೆ ಮತ್ತು ವಿಜಯದಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಆದರೆ ಈ ಎಲ್ಲಾ ಹುಡುಕಾಟಗಳ ಹಿಂದಿರುವ ಮೂಲ ಉದ್ದೇಶ ನಮ್ಮ ಮನಸ್ಸಿಗೆ ಸಮಾಧಾನವನ್ನು ತರುವುದಾಗಿದೆ.ಮನುಷ್ಯನು ಜೀವನದ ವಿವಿಧ ಅನುಭವಗಳ ಮೂಲಕ ತನ್ನ ಆತ್ಮಕ್ಕೆ ಆನಂದ,ನೆಮ್ಮದಿ ಮತ್ತು ಸಮಾಧಾನವನ್ನು ಹುಡುಕುತ್ತಲೇ ಇರುವನು ಎಂಬುದು ಪದ್ಯದ ಭಾವ. "ಮೌನದೊಳೋ ಮಾತಿನೊಳು ಹಾಸ್ಯದೊಳೊ ಹಾಡಿನೊಳೊ"- ಮೌನದಲ್ಲಿ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ದುರೆಯುವುದು, ಮಾತನಾಡುವುದರಿಂದ ಇತರರೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳುವುದು,ನಗು ಮತ್ತು ಹಾಸ್ಯದಿಂದ ದುಃಖವನ್ನು ಮರೆಯಲು ಪ್ರಯತ್ನಿಸಬಹುದು, ಸಂಗೀತ ಮತ್ತು ಹಾಡುಗಳ ಮೂಲಕ ಮನಸ್ಸಿಗೆ ಆನಂದವನ್ನು ಪಡೆಯುವುದು."ಮಾನವಂ ಪ್ರಣಯದೊಳೊ ವೀರ ವಿಜಯದೊಳೊ"- ಪ್ರೀತಿ, ಪ್ರಣಯ ಮತ್ತು ಆತ್ಮೀಯ ಸಂಬAಧಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು, ಸಾಹಸ ಸಾಧನೆ ಮತ್ತು ವಿಜಯಗಳ ಮೂಲಕ ತನ್ನ ಜೀವನಕ್ಕೆ ತೃಪ್ತಿಯನ್ನು ಪಡೆಯಲು ಬಯಸುವುದು. "ಏನೊ ಎಂತೋ ಸಮಾಧಾನಗಳ ನರಸುತಿಹ"- ಯಾವ ಮಾರ್ಗದಿಂದಾದರೂ ಸರಿ,ಮನುಷ್ಯನು ತನ್ನ ಮನಸ್ಸಿಗೆ ಸಮಾಧಾನವನ್ನು ನೀಡುವ ಯಾವುದನ್ನೋ ಹುಡುಕುತ್ತಲೇ ಇರುತ್ತಾನೆ. "ನಾನಂದವಾತ್ಮಗುಣ"- ಮನಸ್ಸಿಗೆ ಆನಂದವನ್ನು ಹುಡುಕುವುದು ಆತ್ಮದ ಇನ್ನೊಂದು ಸ್ವಭಾವ. ಮನುಷ್ಯನು ಮೌನದಲ್ಲಾಗಲಿ, ಮಾತಿನಲ್ಲಾಗಲಿ, ಹಾಸ್ಯದಲಾಗಲಿ, ಹಾಡಿನಲ್ಲಾಗಲಿ, ಹಾಗೆಯೇ ಪ್ರಣಯದಲ್ಲಿ, ವೀರತ್ವದಲ್ಲಿ ಮತ್ತು ವಿಜಯದಲ್ಲಿ ತನ್ನ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.ಅಂದರೆ ಮನುಷ್ಯನ ಜೀವನದಲ್ಲಿ ಎದುರಾಗುವ ವಿವಿಧ ಅನುಭವಗಳ ಮೂಲಕ ಅವನು ತನ್ನ ಅಂತರAಗಕ್ಕೆ ಸಮಾಧಾನವನ್ನು ಹುಡುಕುತ್ತಿರುತ್ತಾನೆ ಎನ್ನುವುದಾಗಿದೆ.ಇದನ್ನು ಭಗವದ್ಗೀತೆಯ ನೆಲೆಯಲ್ಲಿ ನೋಡಿದರೂ, ರಾಗ ಭಯ ಮತ್ತು ಕ್ರೋಧಗಳನ್ನು ಜಯಿಸಿದವನು ಸ್ಥಿತಪ್ರಜ್ಞನ್ನು ಎಂದು ಕರೆಯಲ್ಪಡುತ್ತಾನೆ. ಹೊರಗಿನ ಸುಖ-ದುಃಖಗಳು, ಜಯ- ಅಪಜಯಗಳು, ಪ್ರೀತಿ-ವಿರಹಗಳು, ಯಾವುದೂ ಶಾಶ್ವತವಲ್ಲ. ಅವುಗಳ ನಡುವೆ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಂಡಾಗ ಮಾತ್ರ ನಿಜವಾದ ಶಾಂತಿ ದೊರೆಯುತ್ತದೆ ಎಂಬುದನ್ನು ಗೀತೆಯಲ್ಲಿಯೂ ಹೇಳಲಾಗಿದೆ. ಈ ಪದ್ಯವು ಮಾನವನ ಶಾಶ್ವತವಾದ ಸಮಾಧಾನ ಮತ್ತು ಆನಂದದ ಹುಡುಕಾಟವನ್ನು ಚಿತ್ರಿಸುವ ಚಿಂತನಪೂರ್ಣ ಕಗ್ಗವಾಗಿದೆ. ಮನುಷ್ಯನು ತನ್ನ ಮನಸ್ಸಿನ ನೆಮ್ಮದಿಗಾಗಿ ಮೌನ ಮಾತು ಹಾಸ್ಯ, ಹಾಡು, ಪ್ರಣಯ, ವೀರತ್ವ ಹಾಗೂ ವಿಜಯ ಮುಂತಾದ ವಿವಿಧ ಅನುಭವಗಳ ಮೊರೆ ಹೋಗುತ್ತಾನೆ. ಜೀವನದಲ್ಲಿ ದೊರೆಯುವ ಪ್ರತಿಯೊಂದು ಅನುಭವದಲ್ಲಿಯೂ ಆತ ಸಂತೋಷ ಮತ್ತು ಸಮಾಧಾನವನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಡಿವಿಜಿ ಅವರು ಈ ಕಗ್ಗದಲ್ಲಿ ಮನುಷ್ಯನ ನಿಜವಾದ ಹುಡುಕಾಟವು, "ಆತ್ಮ ತೃಪ್ತಿ"ಮತ್ತು "ಶಾಶ್ವತ ಮನ ಶಾಂತಿ"ಯ ಹುಡುಕಾಟವಾಗಿದೆ ಎಂಬುದನ್ನು ಸೂಚಿಸುತ್ತಾರೆ. ಸರಳವಾದ ಪದಗಳಲ್ಲಿ ಆಳವಾದ, ತಾತ್ವಿಕ ಚಿಂತನೆಯನ್ನು ವ್ಯಕ್ತಪಡಿಸಿದ್ದು, ಮಾನವ ಜೀವನದ ಮೂಲಭೂತವಾದ ಸಮಾಧಾನದ ಹುಡುಕಾಟವನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಜೀವನ ಅನುಭವ, ತಾತ್ವಿಕತೆ ಮತ್ತು ಮಾನವೀಯ ದೃಷ್ಟಿಕೋನಗಳು ಸ್ಪಷ್ಟವಾಗಿ ಕಾಣುತ್ತವೆ.
ಟ್ಯಾಗ್ಸ್:#Sedam#Karnataka

ಮಹಿಪಾಲರೆಡ್ಡಿ
ಪ್ರಧಾನ ಸಂಪಾದಕರುಮೈನಾ ಸೇಡಂ ನ್ಯೂಸ್ (RNI/PRGI: KNKAN/25/A1528) ಸೇಡಂ ಮತ್ತು ಕಲ್ಯಾಣ ಕರ್ನಾಟಕದಾದ್ಯಂತ ಸತ್ಯನಿಷ್ಠ ಹಾಗೂ ಗ್ರಾಮೀಣ ಜನಪರ ಪತ್ರಿಕೋದ್ಯಮಕ್ಕೆ ಬದ್ಧವಾಗಿದೆ.
Ads